ಆಂಡ್ರ್ಯೂ ಇ. "ಆಂಡಿ" ರೂಬಿನ್ (ಜನನ ೧೯೬೩) ಅಮೇರಿಕಾದ ಒಬ್ಬ ಕಂಪ್ಯೂಟರ್ ಪ್ರೋಗ್ರಾಮರ್, ಎಂಜಿನಿಯರ್, ಉದ್ಯಮಿ, ಮತ್ತು ಸಾಹಸೋದ್ಯಮ ಬಂಡವಾಳಶಾಹಿ. ಅವರು ತಂತ್ರಜ್ಞಾನ ಕ್ಷೇತ್ರದ ಆರಂಭಿಕ ಕಂಪನಿಗಳಿಗೆ ಬಂಡವಾಳ ಹೂಡುವ ಪ್ಲೇಗ್ರೌಂಡ್ ಗ್ಲೋಬಲ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಜೊತೆಗೆ, ಸಾಹಸೋದ್ಯಮ ಬಂಡವಾಳಶಾಹೀ ಕಂಪನಿಯಾದ ರೆಡ್‍ಪಾಯಿಂಟ್ ವೆಂಚರ್ಸ್‍ನಲ್ಲಿ ಪಾಲುದಾರರಾಗಿದ್ದಾರೆ. ಅಷ್ಟೇ ಅಲ್ಲದೆ, ಅವರು ಡೇಂಜರ್ ಇಂಕ್ ಮತ್ತು ಆಂಡ್ರಾಯ್ಡ್ ಇಂಕ್ ಎಂಬ ಎರಡು ಕಂಪನಿಗಳ ಸಂಸ್ಥಾಪಕ ಮತ್ತು ಮಾಜಿ ಸಿಇಒ ಕೂಡ ಆಗಿದ್ದಾರೆ. ಆಂಡಿ ಮತ್ತು ಅವರ ಪತ್ನಿ, ರಿ, ಸೇರಿ ಕ್ಯಾಲಿಫ಼ೋರ್ನಿಯಾದ ಲಾಸ್ ಆಲ್ಟೋಸ್‍ನಲ್ಲಿ ವೊಯೇಜುರ್-ಡು-ಟೆಂಪ್ಸ್ ಎಂಬ ಬೇಕರಿಯನ್ನು ಕೂಡ ಹೊಂದಿದ್ದಾರೆ. ಆಂಡ್ರಾಯ್ಡ್ ಅನ್ನು ೨೦೦೫ರಲ್ಲಿ ಗೂಗಲ್ ಸ್ವಾಧೀನಪಡಿಸಿಕೊಂಡ ನಂತರ ರೂಬಿನ್ ಮಾರ್ಚ್ ೨೦೧೩ರ ವರೆಗು ಕಂಪನಿಯ ಮೊಬೈಲ್ ಮತ್ತು ಡಿಜಿಟಲ್ ವಿಷಯ ವಿಭಾಗದ ಹಿರಿಯ ಉಪಾಧ್ಯಕ್ಷರಾದರು. ಅಲ್ಲಿ ಅವರು ಮುಕ್ತ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆಯಾದ ಆಂಡ್ರಾಯ್ಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ರೂಬಿನ್ ತಮ್ಮ ಆವಿಷ್ಕಾರಗಳಿಗಾಗಿ ೧೭ ಪೇಟೆಂಟುಗಳನ್ನು ಹೊಂದಿದ್ದಾರೆ. ೨೦೧೩ರ ಮಾರ್ಚ್ ೧೩ರಂದು ಗೂಗಲ್‍ನ ಈಗಿನ ಮಾತೃ ಕಂಪನಿಯಾದ ಆಲ್ಫಬೆಟ್‍ನ ಸಹಸಂಸ್ಥಾಪಕರಾದ ಲ್ಯಾರಿ ಪೇಜ್ ತಮ್ಮ ಬ್ಲಾಗಿನಲ್ಲಿ ರೂಬಿನ್ ಅವರು ಗೂಗಲ್‍ನ ಇತರೆ ಯೋಜನೆಗಳಲ್ಲಿ ಗಮನಕೊಡಲು ಆಂಡ್ರಾಯ್ಡ್ ವಿಭಾಗದಿಂದ ಹೊರನಡೆಯುತ್ತಿದ್ದಾರೆಂದೂ, ಅವರ ಸ್ಥಾನವನ್ನು ಗೂಗಲ್‍ನ ಸದ್ಯದ ಸಿ‍ಇ‍ಓ ಕೂಡ ಆಗಿರುವ ಸುಂದರ್ ಪಿಚೈ ಅಲಂಕರಿಸಲಿದ್ದಾರೆಂದು ತಿಳಿಸಿದರು. ೨೦೧೩ರ ಡಿಸೆಂಬರಿನಲ್ಲಿ ರೂಬಿನ್ ಗೂಗಲ್‍ನ ರೊಬೊಟಿಕ್ಸ್ ವಿಭಾಗದ ನಿರ್ವಹಣೆ ಪ್ರಾರಂಭಿಸಿದರು (ಇದು ಬೋಸ್ಟನ್ ಡೈನಮಿಕ್ಸ್ ಸೇರಿದಂತೆ ಗೂಗಲ್ ಸ್ವಾಧೀನಪಡಿಸಿಕೊಂಡ ಇತರೆ ಕಂಪನಿಗಳನ್ನು ಒಳಗೊಂಡಿದೆ). ಗೂಗಲ್‍ನಲ್ಲಿ ಒಂಭತ್ತು ವರ್ಷಗಳ ಕಾರ್ಯನಿರ್ವಹಿಸಿದ ನಂತರ ೨೦೧೪ರ ಅಕ್ಟೋಬರ್ ೩೦ರಂದು ರೂಬಿನ್ ತಮ್ಮದೇ ಕಂಪನಿಯೊಂದನ್ನು ಆರಂಭಿಸಲು ಗೂಗಲ್‍ನಿಂದ ಹೊರನಡೆದರು. == ಆರಂಭಿಕ ಜೀವನ == ರೂಬಿನ್ ನ್ಯೂಯಾರ್ಕಿನ ಚಪಾಕ್ವಾದಲ್ಲಿ ೧೯೬೩ರಲ್ಲಿ ಮನಶ್ಶಾಸ್ತ್ರಜ್ಞರೊಬ್ಬರಿಗೆ ಜನಿಸಿದರು. ರೂಬಿನ್ ಯುವಕರಾಗಿದ್ದಾಗ ಕಂಪ್ಯೂಟರ್ ಬುಲೆಟಿನ್ ಬೋರ್ಡ್ ಸಿಸ್ಟಮ್‍ಅನ್ನು ಬಳಸಿದ್ದರು. == ಶಿಕ್ಷಣ == ಹೊರೇಸ್ ಗ್ರೀಲೇ ಪ್ರೌಢ ಶಾಲೆ, ಚಪಕ್ವಾ - ೧೯೭೭-೧೯೮೧. ನ್ಯೂಯಾರ್ಕ್‍ನ ಯೂಟಿಕಾ ಕಾಲೇಜಿನಿಂದ ಗಣಕವಿಜ್ಞಾನ ಪದವಿ - ೧೯೮೧-೧೯೮೬. == ವೃತ್ತಿ == == ಪೇಟೆಂಟುಗಳ ಪಟ್ಟಿ == ರೂಬಿನ್ ಒಟ್ಟು ಹದಿನೇಳು ಅಮೇರಿಕನ್ ಪೇಟೆಂಟುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ: .. 6,701,522ಯು.ಎಸ್ ಪೇಟೆಂಟ್ ೬೭,೦೧,೫೨೨, , 2000 7, : . .. 6,735,624ಯು.ಎಸ್ ಪೇಟೆಂಟ್ ೬೭,೩೫,೬೨೪, , 2000 7, : . .. 6,721,804ಯು.ಎಸ್ ಪೇಟೆಂಟ್ ೬೭,೨೧,೮೦೪, ..., 2000 15, : . .. 8,099,144ಯು.ಎಸ್ ಪೇಟೆಂಟ್ ೮೦,೯೯,೧೪೪, , 2007 20, : . .. 8,065,508ಯು.ಎಸ್ ಪೇಟೆಂಟ್ ೮೦,೬೫,೫೦೮, , 2008 10, : . .. 8,271,413ಯು.ಎಸ್ ಪೇಟೆಂಟ್ ೮೨,೭೧,೪೧೩, , 2008 25, : . .. 8,260,998ಯು.ಎಸ್ ಪೇಟೆಂಟ್ ೮೨,೬೦,೯೯೮, , 2010 28, : . .. 8,179,095ಯು.ಎಸ್ ಪೇಟೆಂಟ್ ೮೧,೭೯,೦೯೫, , 2011 10, : . .. 7,960,945ಯು.ಎಸ್ ಪೇಟೆಂಟ್ ೭೯,೬೦,೯೪೫, , 2011 14, : . .. 8,260,999ಯು.ಎಸ್ ಪೇಟೆಂಟ್ ೮೨,೬೦,೯೯೯, , 2011 30, : . .. 8,464,036ಯು.ಎಸ್ ಪೇಟೆಂಟ್ ೮೪,೬೪,೦೩೬, , 2011 20, : . .. 8,438,373ಯು.ಎಸ್ ಪೇಟೆಂಟ್ ೮೪,೩೮,೩೭೩, , 2011 21, : . .. 8,285,250ಯು.ಎಸ್ ಪೇಟೆಂಟ್ ೮೨,೮೫,೨೫೦, - , 2011 27, : . .. 8,488,778ಯು.ಎಸ್ ಪೇಟೆಂಟ್ ೮೪,೮೮,೭೭೮, , 2012 3, : . .. 8,437,738ಯು.ಎಸ್ ಪೇಟೆಂಟ್ ೮೪,೩೭,೭೩೮, - , 2012 7, : . .. 8,442,484ಯು.ಎಸ್ ಪೇಟೆಂಟ್ ೮೪,೪೨,೪೮೪, - , 2012 13, : . .. 8,437,736ಯು.ಎಸ್ ಪೇಟೆಂಟ್ ೮೪,೩೭,೭೩೬, - , 2012 13, : . .. 8,437,736ಯು.ಎಸ್ ಪೇಟೆಂಟ್ ೮೪,೩೭,೭೩೬, , 2013 27, : . == ಉಲ್ಲೇಖಗಳು ==